ಮೂರರ ಮಜಲೇರಿ…

“ಮೀಸೆ ಹೊತ್ತವನಿಗೆ ದೇಶ ಕಾಣೋಲ್ಲ..” ಅಂತ ಒಂದು ಗಾದೆ ಇದೆ. ಯುವಕರು ಅಂದರೆ ಅತಿ ಸಾಮಾನ್ಯವಾಗಿ ಅಡ್ಡಕಸುಬಿನ ಗೀಳಿಗೆ ಬಿದ್ದವರು ಅಂತ ಲೋಕನುಡಿ. ಅಂತಹ ಗಾದೆಗಳಿಗೆ ತಗಾದೆ ಅನ್ನುವ ಹಾಗೆ ಒಂದಷ್ಟು ಯುವಕ ಸಂಘಗಳು ರಾಷ್ಟ್ರ ಕಾರ್ಯಕ್ಕೆ ಟೊಂಕಕಟ್ಟಿ  ನಿಲ್ಲುವಂತಹ ದಾರ್ಷ್ಟ್ಯವನ್ನ ತೋರಿಸುತ್ತ ಬಂದಿದ್ದಿದೆ. ಇದರಲ್ಲಿ ಬಹಳಷ್ಟು ವಿಧ್ಯಾರ್ಥಿ ಸಂಘಟನೆಗಳು ತಮ್ಮನ್ನ ತಾವು ಮೈಗೂಡಿಸಿ ಕೊಂಡಿರುವುದು ಧನಾತ್ಮಕ ಬೆಳವಣಿಗೆ. ಅಂತಹ ಸಾಲಿಗೆ ಸೇರುವ ಮಾಧ್ವ ಯುವ ಸಂಘದಲ್ಲಿ ಚಿಂತನೆಗಳಿಗೆ ಪದಗುಂಜಗಳಿಂದ ರೂಪಕೊಡುವ ಆಲೋಚನೆ ಅಂಕುರಿಸಿ, ಒಂದು ವಿದ್ಯುನ್ಮಾನ ಮಾಸಿಕವನ್ನ ಜಾರಿಗೆ ತರಲಾಯ್ತು. ಸಾಸಿರದಿನಗಳ ಗಡಿದಾಟಿ, ಬರೋಬ್ಬರಿ ಮೂರುವರ್ಷಗಳ ಮೈಲುಗಲ್ಲನ್ನ ಹಿಂದಿಕ್ಕಿರುವ ಈ ಪ್ರಯತ್ನದ ಪ್ರತಿರೂಪವೇ “ಅಂಕುರ” ಮಾಸಪತ್ರಿಕೆ.

“ಮುಕ್ತ ಚಿಂತನೆಗಳ ಅನಾವರಣ” ಅನ್ನುವಂತಹ ಅಡಿಬರಹದೊಂದಿಗೆ ಪೂರ್ವ ಹಾಗು ಹಾಲಿ ವಿದ್ಯಾರ್ಥಿಗಳ ಚಿಂತನೆಗಳನ್ನ ಅಭಿವ್ಯಕ್ತಪಡಿಸುವ ಅವಕಾಶ ಕೊಡುವ ನಿಟ್ಟಿನಲ್ಲಿ ಆರಂಭವಾದ ಈ ಆಶಯಕ್ಕೆ ಧನಾತ್ಮಕವಾದ ಪ್ರತಿಕ್ರಿಯೆ ದೊರಕಿದೆ. ಯಾವುದೇ ವಿಷಯದ ಏಕತಾನತೆ ಇರದಂತೆ ವಿಭಿನ್ನ ವಿಚಾರಗಳನ್ನ ಒಗ್ಗೂಡಿಸಿ ಆ ಮಾಸಿಕವನ್ನ ತಲುಪಿಸಲಾಗುತ್ತಿದೆ. “ಅ ನೋ ಭದ್ರಾಹ ಕ್ರತವೋ ಯಂತು ವಿಶ್ವತಃ” ಅನ್ನುವ ವೇದವಾಣಿಯನ್ನನುಕರಿಸಿ ನಮ್ಮ ಆಶಯಕ್ಕೆ ವಿಚಾರಕ್ಕೆ ಪೂರಕವಾಗುವಂತ ಬಾಹ್ಯ ಬರಹಗಾರರ ಆಲೋಚನಾ ಲಹರಿಯನ್ನು ಸಹ ಈ ವಾಹಿನಿಗೆ ಸೇರಿಸಲಾಗಿದೆ.

ಆ ಯಶಸ್ಸಿಗೆ ಹೆಗಲು ಕೊಟ್ಟಿರುವ ಸಂಘಟಕ ವೃಂದ ಈ ಕೆಳಗಿನಂತಿದೆ.

ಡಾ|| ಕೌಶಿಕ್ ಉರಾಳ್ , ಪವನ್ ಕುಲಕರ್ಣಿ, ಶ್ರೀವತ್ಸ ಉಪಾದ್ಯ , ಸಂದೀಪ್ ಭಟ್ ನೆಂಪು, ಸುನಿಲ್ ಕುಮಾರ್ ಕಲಾಸಿ,             ಮಹೇಶ್ ಸಿ ಪಿ, ವಿಶ್ವಾಸ್ ಕೆ, ರಕ್ಷಿತ್ ಬಲ್ಲಾಳ್, ಪವನ್ ಕುಮಾರ್ ದೇಶಪಾಂಡೆ (IPL), ರಕ್ಷಿತ್ ಬಲ್ಲಾಳ್,                                       ಅಭಿಷೇಕ್ ಟಿ ವಿ, ಕಿಶನ್, ಪವನ ಗುಮಾಸ್ತೆ, ಸುಹಾಸ್ ಜಾವಗಲ್, ವಿವೇಕ್ ರಾವ್, ಪವನ್ ಕುಮಾರ್ ಡಿ.ಎಚ್. , ಶಂಕರ್ ಪ್ರಸಾದ್, ರಜನಿಕಾಂತ್, ನಟೇಶ್, ವಿನಯ್ ಹೆಗ್ಡೆ, ಕಾರ್ತಿಕ್ ಹೆರಕಲ್, ಅಭಿಷೇಕ್ ಭಟ್.

ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎನ್ನುವಂತೆ ನಮ್ಮ ಪರಂಪರೆ- ಸಂಸ್ಕೃತಿ-ಸಂಸ್ಕಾರಗಳೊಡನೆ ಪ್ರಚಲಿತ ವಿಜ್ಞಾನ-ವೈಚಾರಿಕತೆಗಳನ್ನೊಳಗೊಂಡ ಆದರ್ಶಮಯ ಜೀವನಕ್ಕೆ ಪೂರಕವಾಗುವ ನಿಟ್ಟಿನಲ್ಲಿ ನಮ್ಮ ಚಿಂತನೆಗಳು ಅಂಕುರಿಸಲಿ ಅನ್ನುವುದೇ ನಮ್ಮ ಆಶಯ           ಇವರೊಟ್ಟಿಗೆ ಈ ಮಾಸಿಕವನ್ನ ಸಂಪನ್ನಗೊಳಿಸಿರುವ ಎಲ್ಲ ಪ್ರತ್ಯಕ್ಷ ಹಾಗು ಪರೋಕ್ಷ ಕಾರ್ಯನಿರತರು ಇದಕ್ಕೆ ಅಭಿನಂದನಾರ್ಹರು. ತಮ್ಮ ಅವಿಶ್ರಾಂತ ಕೆಲಸಗಳ ನಡುವೆಯೂ ಈ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿ ಕೊಂಡಿರುವ ಪೂರ್ವನಿಲಯವಾಸಿಗಳೂ ಶ್ಲಾಘನೀಯರು.

–ವಿವೇಕ್ ರಾವ್.

 

Advertisements

ಸಂಪಾದಕೀಯ

ಕಳೆದ ತಿಂಗಳು ಆತ್ಮೀಯ ಸ್ನೇಹಿತರೋಡನೆ ಕುದುರೆಮುಖದ ಚಾರಣಕ್ಕೆ ತೆರಳಿದ್ದೆ, ಅದೊಂದು ಅದ್ಭುತ ಅನುಭವ. ಪಶ್ಚಿಮ ಘಟ್ಟಗಳ ಸೌಂದರ್ಯ ಲಹರಿಗೆ ಮನಸೊತ್ತಿದ್ದೆ. ಆದರೆ ಕುದುರೆಮುಖವೆಂದರೆ ಇದಷ್ಟೇ ಅಲ್ಲ. ಕುದುರೆಮುಖ ಎಂದರೇ ನೆನಪಾಗಿದ್ದುಅವ್ಯಾಹತವಾಗಿ ಮೂವತ್ತೈದು ವರ್ಷಗಳ ಕಾಲ ನಿರಂತರ ಭೂರಮೆಯ ಒಡಲು ಬಗೆದು ಬಿಡಿಗಾಸಿಗೆ ವಿದೇಶಿಗರಿಗೆ ಮಾರಿದ್ದು… ಜೀವನದಿಗಳ ಬುನಾದಿಗೆ ಪೆಟ್ಟು ಕೊಡುವ ಅಪಾಯ ತಪ್ಪಿಸಿದ ಐತಿಹಾಸಿಕ ದಾಖಲೆಯ ಚಳವಳಿ… ರಾಷ್ಟ್ರೀಯ ಉದ್ಯಾನದ ನೆಪದಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ… ಬದುಕು ಕಳೆದುಕೊಳ್ಳುವವರಿಗೆ ಧ್ವನಿಯಾಗುತ್ತೇವೆಂದು ಉದ್ಯಾನ ವಿರೋಧಿ ಹೋರಾಟ ಮಾಡುತ್ತಲೇ ಮಲೆನಾಡಿನ ಹಸಿರು ನೆಲದಲ್ಲಿ ನೆತ್ತರು ಚೆಲ್ಲಿದ ನಕ್ಸಲರು… ಹುಲಿ ಯೋಜನೆಯ ಗಲಿಬಿಲಿ…
ಇವಿಷ್ಟಲ್ಲದೆ ಇನ್ನೆಷ್ಟೋ ಘಟನಾವಳಿಗೆ ಈ ಕುದುರೆಯ ಮುಖದಂತೆ ಕಾಣುವ ಬೆಟ್ಟದ ತಪ್ಪಲಿನ ಪ್ರಶಾಂತ ತಾಣ ಸಾಕ್ಷಿಯಾಗಿದೆಯೆಂದರೆ ಅದೊಂದು ಬಹುದೊಡ್ಡ ಅಚ್ಚರಿ!
ಹೌದು, ಕುದುರೆಮುಖವೆಂದರೆ ಬರೀ ಬೆಟ್ಟದ ಸಾಲಲ್ಲ. ನಾಡಿನ ಜೀವಸೆಲೆಯಾದ ಪಶ್ಚಿಮಘಟ್ಟ ಶ್ರೇಣಿಯ ಮುಕುಟಮಣಿ. ಕುದುರೆಮುಖ ಕಬ್ಬಿಣ ಅದಿರು ಕಂಪನಿ ಇಲ್ಲಿ ಅದಿರು ತೆಗೆಯುತ್ತಿರುವ ತನಕವೂ ಮಲೆನಾಡಿನಲ್ಲಾದ ಹಲವು ತಲ್ಲಣಗಳಿಗೆ ಕಾರಣವಾಗಿದ್ದ ಕುದುರೆಮುಖ ಗಿರಿಶ್ರೇಣಿ ಈಗ ಸ್ಥಬ್ಧ. ಅಂದು ವೈಭೋಗದ ಜೀವನ ಕಂಡ ಕುದುರೆಮುಖ ಪಟ್ಟಣದಲ್ಲಿ ಈಗ ಸ್ಮಶಾನ ಮೌನ. ಈ ನಗರಕ್ಕೆ ತಾಗಿಕೊಂಡಿದ್ದ ಸುತ್ತಮುತ್ತಲಿನ ವಹಿವಾಟು ನೆಲಕಚ್ಚಿದೆ. ಅದಿರು ತೆಗೆದು ಮಾರಿದ್ದರಿಂದ ಸರಕಾರಕ್ಕೆ ವಿದೇಶಿ ವಿನಿಮಯ ಹೆಚ್ಚಾಗಿತ್ತು. ಆದರೆ, ಇದೀಗ ಗಣಿಗಾರಿಕೆಗೆ ಹಾಕಿದ ಬಂಡವಾಳ ತುಕ್ಕು ಹಿಡಿಯುತ್ತಿದೆ. ಗಣಿಗಾರಿಕೆ ನಿಂತ ಮೇಲೆ, ಇರುವ ಸಂಪನ್ಮೂಲ ಬಳಸಿಕೊಂಡು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದ್ದ ಸರಕಾರ ಈಗ ಕೈಕಟ್ಟಿ ಕುಳಿತಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಮುಖ ಬೆಳಕಿಗೆ ಬಂದಿದ್ದು 1913ರಲ್ಲಿ. ಮೈಸೂರಿನ ಭೂ ಸಂಶೋಧಕ ಸಂಪತ್ ಅಯ್ಯಂಗಾರ್ ಕುದುರೆಮುಖಕ್ಕೆ ಬಂದಾಗ, ಇಲ್ಲಿನ ಬೆಟ್ಟಗಳಲ್ಲಿ ಕಬ್ಬಿಣದ ಅದಿರಿರುವ ಬಗ್ಗೆ ಪತ್ತೆ ಹಚ್ಚಿದ್ದರು. 1965ರಲ್ಲಿ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮವು ಈ ಪ್ರದೇಶದ ಉತ್ಖನನ ನಡೆಸಿ, ಕುದುರೆಮುಖದಲ್ಲಿ ವಾರ್ಷಿಕ 25 ದಶಲಕ್ಷ ಟನ್ ಅದಿರು ತೆಗೆಯಬಹುದೆಂಬ ವರದಿ ನೀಡಿತು. ತರುವಾಯ 1975ರಲ್ಲಿ ಭಾರತ-ಇರಾನ್ ಮಧ್ಯೆ ಅದಿರು ಒಪ್ಪಂದವೂ ಆಗಿತ್ತು. ಈ ಎಲ್ಲ ಪ್ರಕ್ರಿಯೆ ಬಳಿಕ ಕುದುರೆಮುಖ ಬೆಟ್ಟದಲ್ಲಿರುವ ಮ್ಯಾಗ್ನೈಟ್ ಅದಿರಿನ ಲಾಭ ಪಡೆಯಲು ಮುಂದಾಗಿದ್ದ ಕೇಂದ್ರ ಸರಕಾರ, 1969ರಿಂದ 1999ರ ಅವಧಿಗೆ (30ವರ್ಷ) ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‍ಎಂಡಿಸಿ)ಕ್ಕೆ ಶೇ.100 ರಫ್ತು ಆಧಾರಿತ ಗಣಿಗಾರಿಕೆಗೆಂದು ಒಟ್ಟು 5,218 ಹೆಕ್ಟೇರ್ ಪ್ರದೇಶವನ್ನು ಗುತ್ತಿಗೆ ನೀಡಿತ್ತು. ಗಣಿಗಾರಿಕೆಗೆ ವಿದೇಶಿ ನೆರವು ಪಡೆದಿದ್ದ ಎನ್‍ಎಂಡಿಸಿ 1972ರಲ್ಲಿ 613 ಹೆಕ್ಟೇರ್ ಪ್ರದೇಶವನ್ನು ಹಿಂದೆ ಪಡೆದು ಯೋಜನೆಯನ್ನು ಕುದುರೆಮುಖ ಅದಿರು ಕಂಪನಿಗೆ(ಕೆಐಓಸಿಎಲ್) ವಹಿಸಿತ್ತು. 1976ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕೆಐಓಸಿಎಲ್ ನಿರಂತರ ಗಣಿಗಾರಿಕೆ ಮುಂದುವರಿಸಿತು. ಕುದುರೆಮುಖದಲ್ಲಿದ್ದ ಅಪಾರ ಪ್ರಮಾಣದ ಅದಿರು ಹಾಗೂ ಅದಕ್ಕೆ ವಿದೇಶದಲ್ಲಿ ಇದ್ದ ಬೇಡಿಕೆಗನುಗುಣವಾಗಿ ಏಷ್ಯಾದಲ್ಲೇ ಅತಿದೊಡ್ಡ ಸಾರ್ವಜನಿಕ ಉದ್ಯಮವಾಗಿ ಹೊರಹೊಮ್ಮಿದ ಕುದುರೆಮುಖ ಗಣಿಗಾರಿಕೆ ಕಂಪೆನಿ, ಪಶ್ಚಿಮಘಟ್ಟದ ಬೆಟ್ಟ ಬಗೆದು ವಿದೇಶಕ್ಕೆ ರಫ್ತು ಮಾಡಲಾರಂಭಿಸಿತ್ತು. ಇಲ್ಲಿನ ಅದಿರು ಹೆಚ್ಚಾಗಿ ರಫ್ತಾಗಿದ್ದು ಜಪಾನ್,ದಕ್ಷಿಣ ಕೊರಿಯಾ, ಚೀನಾ, ತೈವಾನ್ ದೇಶಗಳಿಗೆ. ಅಚ್ಚರಿ0iÉುಂದರೆ, ಒಂದು ಕೆ.ಜಿ. ಅದಿರನ್ನು 40 ಪೈಸೆಗೆ ಮಾರಾಟ ಮಾಡಲಾಗುತ್ತಿತ್ತು.
ವಾರ್ಷಿಕ ಸುಮಾರು 20 ಲಕ್ಷ ಟನ್ ಅದಿರು ತೆಗೆಯುತ್ತಿದ್ದ ಸಂಸ್ಥೆಯ ಗಣಿಗಾರಿಕೆಯಿಂದ ಮಧ್ಯ ಕರ್ನಾಟಕದ 8 ಜಿಲ್ಲೆಗಳ ಜೀವನಾಡಿಯಾದ ತುಂಗಾ- ಭದ್ರಾ ನದಿಗಳ ಮೂಲಕ್ಕೆ ಎರವಾಗುತ್ತಿದ್ದ ಕಾರಣ ಸ್ಥಳೀಯರು ಹಾಗೂ ಪರಿಸರವಾದಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪೂರ್ವ ನಿಗದಿಯಂತೆ 1999ಕ್ಕೆ ಮುಗಿಯಬೇಕಿದ್ದ ಅದಿರು ಗಣಿಗಾರಿಕೆ ಮತ್ತೆ ಮುಂದುವರಿಯುತ್ತಿದ್ದಂತೆ, ಮಲೆನಾಡಿನಲ್ಲಿ ಗಣಿಗಾರಿಕೆ ವಿರೋಧಿ ಜನಾಂದೋಲನ ಹಾಗೂ ಕಾನೂನು ಹೋರಾಟ ಪ್ರಬಲವಾಯಿತು. ಗಣಿಗಾರಿಕೆ ಮಾಡಿದರೆ, ತುಂಗಾ, ಭದ್ರಾ ಮತ್ತು ನೇತ್ರಾವತಿ ನದಿಮೂಲಗಳು ನಾಶವಾಗುವ ಅಪಾಯ ಅರಿತು ಹೋರಾಟ ತೀವ್ರಸ್ವರೂಪ ಪಡೆದುಕೊಂಡಿತು. ಈ ಹೋರಾಟಕ್ಕೆ ದೇಶದ ಪ್ರಮುಖ ಹೋರಾಟಗಾರರಾದ ಸುಂದರ್ಲಾಲ್ ಬಹುಗುಣ, ಮಹೇಂದ್ರ ಸಿಂಗ್ ಟಿಕಾಯತ್, ಮೇಧಾ ಪಾಟ್ಕರ್, ಡಾ.ಶಿವರಾಮ ಕಾರಂತ, ಡಾ.ಯು.ಆರ್.ಅನಂತಮೂರ್ತಿ, ಕೆ.ವಿ.ಸುಬ್ಬಣ್ಣ , ಕಡಿದಾಳು ಶಾಮಣ್ಣ, ಕಲ್ಕುಳಿ ವಿಠ್ಠಲ್ ಹೆಗ್ಡೆ ಸೇರಿದಂತೆ ನೂರಾರು ದಿಗ್ಗಜರು ಬೀದಿಗಿಳಿದಿದ್ದರು. 2000ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಮಾವೇಶ, 2001ರ ಐತಿಹಾಸಿಕ ಬಂದ್, ಧರಣಿ, ಮುಷ್ಕರಗಳು, ಖನಿಜ ಭವನ ಮುತ್ತಿಗೆ, ಕುದುರೆಮುಖ ಚಲೋ, ನದಿ ತೀರದುದ್ದಕ್ಕೂ ನಡೆದ ಪಂಜಿನ ಮೆರವಣಿಗೆ ಸೇರಿದಂತೆ ವಿವಿಧ ಹಂತದ ಹೋರಾಟಕ್ಕೆ ರಾಜ್ಯದ ಲಕ್ಷಾಂತರ ಜನರು ಸ್ಪಂದಿಸಿದ್ದರು. ಪರಿಸರವಾದಿಗಳು, ಗಿರಿಜನರು ಹಾಗೂ ನದಿ ಪಾತ್ರದಲ್ಲಿನ ಜನಾಭಿಪ್ರಾಯಕ್ಕೆ ಮನ್ನಣೆ ನೀಡಿದ ನ್ಯಾಯಾಲಯ 2005 ಡಿ.31 ಕ್ಕೆ ಗಣಿಗಾರಿಕೆ ನಿಲ್ಲಿಸಲು ಆದೇಶ ನೀಡಿತು.
ಕುದುರೆಮುಖ ಅದಿರು ಕಂಪನಿ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿಸಿದವರು ಹಾಗೂ ಆದಿವಾಸಿಗಳ ಒಕ್ಕಲೆಬ್ಬಿಸುವುದರ ವಿರುದ್ಧ ಸಕ್ರಿಯ ಹೋರಾಟದ ಮುಂಚೂಣಿಯಲ್ಲಿದ್ದು, ಜನಪ್ರೀತಿ ಗಳಿಸಿದ ಕೆಲವರು ಮುಂದೆ ಮಲೆನಾಡಿನ ನಕ್ಸಲ್ ಚಳವಳಿಯಲ್ಲಿ ಗುರುತಿಸಿಕೊಂಡು ಜೀವತೆತ್ತಿದ್ದೂ ವಾಸ್ತವವಾಗಿದೆ.
ಕುದುರೆಮುಖ ಕಂಪನಿಯ ಗಣಿಗಾರಿಕೆ, ಜೀವ ವೈವಿಧ್ಯತೆಯ ನಾಶ ಒಂದು ಕಡೆಯಾದರೆ, ಮಲೆನಾಡಿನ ದಟ್ಟ ಕಾಡಿನಲ್ಲಿ ಆರಂಭವಾಗಿದ್ದ ಅದಿರು ಕಾರ್ಖಾನೆಯಿಂದಾಗಿ ಕುದುರೆಮುಖದಲ್ಲಿ ಒಂದು ಟೌನ್ಶಿಪ್ ನಿರ್ಮಾಣವಾಗಿತ್ತು. ಕಾರ್ಮಿಕರು, ಅಧಿಕಾರಿಗಳು, ಗುತ್ತಿಗೆ ಕಾರ್ಮಿಕರು ಸೇರಿದಂತೆ ಸುಮಾರು ಐದು ಸಾವಿರ ಮಂದಿ ಕೆಲಸ ನಿರ್ವಹಿಸುತ್ತಿದ್ದರು. ಇದು ದೇಶಕ್ಕೆ ವಿದೇಶಿ ವಿನಿಮಯ ದೊರಕಿಸಿಕೊಡುತ್ತಿದ್ದದ್ದು ಮಾತ್ರವಲ್ಲ, ಸ್ಥಳೀಯವಾಗಿ ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲೂಕಿನ ಆರ್ಥಿಕ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರವಹಿಸಿತ್ತು. ಜನರಿಗೆ ಕೂಲಿ, ರೈತರಿಗೆ ಮಾರುಕಟ್ಟೆಯಾಗಿ ಕುದುರೆಮುಖ ಬೆಳೆದಿತ್ತು. ಸ್ಥಳೀಯರ ಹೋರಾಟ ಹಾಗೂ ನ್ಯಾಯಾಲಯದ ತೀರ್ಪಿನಿಂದಾಗಿ ಗಣಿಗಾರಿಕೆ ನಿಲ್ಲುತ್ತಿದ್ದಂತೆ ನೌಕರರು, ಕಾರ್ಮಿಕರಿಗೆ ಕೆಲಸ ಇಲ್ಲದಾಯಿತು. ಹಲವು ಮಂದಿ ಸ್ವಯಂ ನಿವೃತ್ತಿ ಪಡೆದುಕೊಂಡರೆ, ಮತ್ತೊಂದಷ್ಟು ಜನ ಬೇರೆಡೆಗೆ ವರ್ಗವಾಗಿ ಹೋದರು.
ಒಂದು ಕಾಲದಲ್ಲಿ ಅತ್ಯಂತ ವೈಭೋಗದಿಂದ ಇದ್ದ ನಗರ ಇಂದು ಅಕ್ಷರಶಃ ಪಾಳು ಬಿದ್ದಿದೆ. ಇಲ್ಲಿರುವ ದೇವಾಲಯ, ಚರ್ಚ್ ಹಾಗೂ ಮಸೀದಿಗಳು ಸಹ ಬಾಗಿಲು ಮುಚ್ಚಿವೆ. ಆಗಿನ ಸುಸಜ್ಜಿತ ಪಟ್ಟಣ ಈಗ ಕೊಳ್ಳೆ ಹೊಡೆದ ಪಾಳು ಬೀದಿಯಂತೆ ಗೋಚರಿಸುತ್ತಿದೆ. ಸರಕಾರ ಕೋಟ್ಯಂತರ ರೂ. ವ್ಯಯಮಾಡಿ ಹಾಕಿದ ಭಾರೀ ಗಾತ್ರದ ಯಂತ್ರಗಳು ತುಕ್ಕುಹಿಡಿಯುತ್ತಿವೆ. ಅಧಿಕಾರಿಗಳು, ಕಾರ್ಮಿಕರ ವಸತಿ ಗೃಹಗಳು ಖಾಲಿ ಬಿದ್ದಿವೆ. ಕುದುರೆಮುಖದಲ್ಲಿ ಸಾವಿರಾರು ಮನೆಗಳು ಖಾಲಿ ಬಿದ್ದಿದ್ದರೆ, ಅದೇ ಮೂಡಿಗೆರೆ ತಾಲೂಕಿನಲ್ಲಿ ಸಾವಿರಾರು ಮಂದಿ ವಸತಿರಹಿತ ಕೂಲಿಗಳಿರುವುದು ವ್ಯವಸ್ಥೆಯ ದುರಂತ ಎಂದೇ ಹೇಳಬಹುದು.
ಗಣಿಗಾರಿಕೆಯಿಂದ ಪರಿಸರದ ಮೇಲಾದ ಹಾನಿ ಸರಿಯಾಗಲು ದಶಕಗಳೇ ಬೇಕು ಎಂಬುದು ಸತ್ಯವಾದರೂ, ಈಗ ಅಲ್ಲಿನ ಹಸಿರು ಸಿರಿ ಮೈದುಂಬುತ್ತಿದೆ. ಬೆಟ್ಟದಂಚಿನ ಝರಿ-ತೊರೆಗಳ ಜುಳು-ಜುಳು ನಾದ ಮರುಕಳಿಸುತ್ತಿದೆ. ಈ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ. ಇಲ್ಲಿರುವ ಕೇಂದ್ರೀಯ ವಿದ್ಯಾಲಯ ವಿದ್ಯಾರ್ಥಿಗಳಿಲ್ಲದೆ ಸೊರಗುತ್ತಿದೆ. ಸಮುದ್ರಮಟ್ಟದಿಂದ 1,894 ಮೀಟರ್ ಎತ್ತರದಲ್ಲಿರುವ, ವಾರ್ಷಿಕ 7,000 ಮಿ.ಮೀ ಮಳೆ ಬೀಳುವ ಪ್ರಕೃತಿಯ ಅದ್ಭುತ ಸೃಷ್ಟಿಯ ಗಿರಿಶ್ರೇಣಿಯ ಕುದುರೆಮುಖ ಪಟ್ಟಣವನ್ನು ಉತ್ತಮ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವ ಪ್ರಯತ್ನ ಆಗಬೇಕಿದೆ. ಜೀವ ವೈವಿಧ್ಯತೆಯ ಹೆಸರಾದ ಪಶ್ಚಿಮಘಟ್ಟದಲ್ಲಿನ ಔಷಧೀಯ ಸಸ್ಯಗಳ ಅಧ್ಯಯನ ಆಗಬೇಕಿದೆ. ಇಲ್ಲಿನ ಅಪರೂಪದ ಪ್ರಾಣಿ ಸಂಕುಲಗಳು ಹಾಗೂ ಗಿಡಮೂಲಿಕೆಗಳ ಅಧ್ಯಯನ ಹಾಗೂ ದಾಖಲೆಗಾಗಿ ವನ್ಯ ಸಂಪತ್ತಿನ ಅಧ್ಯಯನ ಕೇಂದ್ರ ತೆರೆಯಲೂ ಉತ್ತಮ ಅವಕಾಶವಿದೆ. ಪರಿಸರ ಪ್ರವಾಸಕ್ಕೆಂದು ನೆರೆಯ ಕೇರಳ, ತಮಿಳುನಾಡು ರಾಜ್ಯಗಳಿಗೆ ಹೋಗುವ ಪ್ರವಾಸಿಗಳನ್ನು ಕುದುರೆಮುಖದತ್ತ ಸೆಳೆಯಲು ಇಕೋ ಟೂರಿಸಂ ಅಭಿವೃದ್ಧಿಪಡಿಸಬಹುದು. ಈ ದಿಸೆಯಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯೂ ತನ್ನ ಗಮನ ಹರಿಸಬೇಕಿದೆ. ಹಿಂದಿನ ಸರಕಾರದ ಅವಧಿಯಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವೇ ವಿನಾ ಯಾವುದೂ ಕಾರ್ಯಗತವಾಗಿಲ್ಲ.
ಅರಣ್ಯ ಸಂಶೋಧನಾ ಕೇಂದ್ರ, ಪೋಲಿಸ್ ತರಬೇತಿ ಕೇಂದ್ರ,ಮಿಲಿಟರಿ ಅಕಾಡೆಮಿ, ಇಕೋ ಟೂರಿಸಂ, ಹುಲಿ ಸಂರಕ್ಷಣಾ ವಲಯ ಹೀಗೆ ಹಲವು ಯೋಜನೆಗಳ ಬಗ್ಗೆ ಆದ ಪ್ರಸ್ತಾವನೆಗಳು ಕೇವಲ ಕಡತಗಳಲ್ಲಿವೆ. ಗಣಿಗಾರಿಕೆಯ ಅದಿರು ಶುದ್ಧೀಕರಣಕ್ಕಾಗಿ ನಿರ್ಮಿಸಿದ್ದ ಲಕ್ಯಾ ಡ್ಯಾಂನಲ್ಲಿ ಹೂಳು ತುಂಬಿದ್ದು, ಅದನ್ನು ಶುದ್ಧೀಕರಿಸಿದರೆ ಇಡೀ ಮಂಗಳೂರು ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಯನ್ನೂ ಮಾಡಬಹುದು. ಆದರೆ ಈ ಎಲ್ಲದಕ್ಕೂ ಆಳುವ ದಣಿಗಳಿಗೆ ಇಚ್ಛಾಶಕ್ತಿ ಬೇಕಾಗಿದೆ. ಇರುವುದನ್ನು ಬಿಟ್ಟು ಇರದಿರುವುದರೆಡೆಗೆ ತುಡಿಯದೆ, ಗಿರಿಶಿಖರದ ಮೇಲೆ ಅಭಿವೃದ್ಧಿಯ ಗರಿ ಮೂಡಲಿ.

ANGER -Ahana

It is one raging emotion.

Which kills thousand serene moments,

by waging war in oneself.

There it shatters many hearts,

and your loved ones hurt for years.

Feelings are crushed in seconds,

with tears rolling down the face.

When the storm passes,

and the silence befalls.

Devastated you look around,

and all you see,

are the bridges burnt in rage.

As the loneliness casts its shadow;

you are left all alone,

in the life’s beautiful meadows.

Rediscovery of Past: Indian Muslims part-1 D. H. Pavankumar

A civilization provides a identity of who ‘we’ are and ensures the psychological  bonding among people. Civilization is spine of the country. Country’s strength lies in the strength of deep rooted cultural identity and traditions. A broken civilization can result in ethnic indifferences, communal riots and cataclysm. The integrity of India has to overcome so many hurdles. The main threats of Indian integrity is from Islamic radicalization from pakistan, marxist and moists supported by china and Western think tanks in the name of human rights.

A nation’s strength depends upon the cohesiveness of its culture. RSS Sarasanghachalak, Mohan Bhagavath has claimed that ‘For the next 5 years we have to work with the aim of bringing equality among all the Hindus in the country. All Hindus should be drinking water at one place, should be praying at one place and after their death, their bodies should be burnt at the same place.…the whole world calls Indians as Hindus…like people of Germany are called Germans, of America are called Americans, people of Hindustan are called Hindus…it doesn’t matter what their food habits, language, where they live, or their religion is…they are Hindus.’ 

This was enough for the ignition temperature needed for the channels.  It has increased its TRPs but the essence of question still boils in everyone. Who is a hindu? The cause for it lies in the Indian educational system. Indian education system is deep rooted in communist ideology. It has never seen in Indians’ perspective of history.

To quote from  Sandeep balakrishna’s article in Indiafacts,  “India has remained united despite severe threats both from within and without only because Indians still have—most unconsciously—anchored themselves to that innate Hindu soul. This Hindu soul finds expression everywhere even today—from laws, the administrative language, national symbol, the shared sacred spaces across India’s geography (and even beyond, in the immediate neighbourhood), clothes, eating habits, festivals, pilgrimage, Gods and modes of worship, music, dance, movies, idioms used in daily life, and in temples”[1].

So, I posted this on facebook wall  “As every1 know all Muslims, Christians were Hindus long back. So how does dey bcom minority by chng in rlgn? V al hv same roots. ” I was challenged to prove my statement. The friend who challenged gave a two vague links [2][3] which stated Muslims were present in coastal areas of India. All muslims are not converted and discussion continued. So, here it is we will go through the past.
Indian Muslims and their history.

Abdur Rahaman invaded Kabul and its sorroundings as early as C.E. 664, a few thousands of abrigine were reported to have converted to Islam. Subuktagin also faught against the Hindus and reported to have been converted to Islam [4]. These developments had happened in the trans Indus parts, so Lanepoole was correct in saying that in C.E 1000 there were no Muslims in northern India east of the Indus.[5]

So many claim that muslims were settled at the Malabar, sind, Gujarat coast. Yes, its indeed true that there were some settlements of muslims in these regions.

Sind Area:

Muhammad bin Qasim Sakifi conquered parts of Sind in C.E 712. He built mosques, appointed muslims governors and propogated Islam in Alor, Nirun, Debul and Multan..etc [6].  In Debul, he enslaved and converted some women and children, and left a contingent of 4000 soldiers to garrison the place [7]. Al Biladuri elucidates that people of Sawandari, Basmad, Kiraj and Alor were converted in huge numbers[8]. The reports of Muhammed bin Qasim Sakifi to Hajjaj also poimt to large number of conversions.[9] In C.E 717 Caliph Umar wrote to Indian rulers, inviting them to embrace Islam. In response to it some people turned muslims and took Arab names [10]. After Muhammed bin Qasim’s recall, Arab power reduced in Sind and neo-converts returned to their formal faith. Sir Dension Ross says that after Qasim’s recall, the Muslims retained some footholds on the west banks of river Indus, but they were microscopic and gradually sublimed to Hinduism[11].

Gujarath:

Similar was the situation in Gujarat. A military expedition was sent out in C.E. 636 from Oman to pillage the coasts of India. It proceeded as far as Thana (near Bombay).[12] About the same time expeditions were sent to Broach and Debul, but because of Caliph Umar’s opposition to hazardous voyages, the policy of armed interference by sea remained in abeyance. Meanwhile commerce by sea continued. In the eighth century, Arab fleets attacked Broach and port towns on the Kathiawar coast.[13]  Thus because of armed attacks, but more so through the channel of trade, foreign Muslims and indigenous converts began to be seen in the coastal towns of Gujarat. Ibn Hauqal (C.E. 968) observes that from Kambaya to Saimur is the land of Balhara. It is a land of infidels, but there are Muslims in its cities .[14] Masudi, who visited India in 916, found Muslims of Siraf, Oman, Baghdad and Basra at Saimur (modern Chaul) besides others who were children of Arabs born there. There were Jama Masjids at Famhal, Sindan, Saimur and Kambaya.[15] All these facts indicate the presence of some Muslims in Gujarat.  But their number was small. This finds confirmation in the fact that in an anti-Muslim riot in Cambay, in the middle of the eleventh century, only eighty persons had been killed.[16]  Besides, the population of traders is by nature and profession migratory, and the number of Muslims in Gujarat does not seem to have been large.

Malabar:

Arab Muslims first settled on the Malabar coast about the end of the seventh century. These Arab traders who settled down on India’s coast between the seventh and the ninth centuries were treated with tolerance by the Hindus, and so they grew in numbers. In the early part of the eighth century, Hajjaj bin Yusuf (who sent Muhammad bin Qasim to Sind), drove out some persons of the house of Hasham, and they left their homeland to settle in Konkan and the Cape Camorin area. Refugees or traders, Muslims were welcome in India, and apparently, facilities were given to them to settle and acquire lands and openly practice their religion [17]In course of time mosques were erected at eleven places on the Malabar coast.[18]But till the end of the tenth century their settlements were only too small. The Muslim Arab historiog-raphers, while describing the achievements of Muslims on the Malabar Coast, exaggerate their numbers and influence. They also miss to mention the Hindu reabsorbtion of neo-converts, for Sulaiman, who visited India in the ninth century, states that he did not find any Muslims or Arabic speaking people on the western coast.[19]

In short, while there can be no doubt about the presence of some Muslims in Sind, Gujarat and on the western coast of India, their number till the end of the tenth century was almost microscopic. In Hindustan proper, east of the river Indus, there were hardly any Musalmans in C.E. 1000.

Continues….

Footnotes:

 1. http://www.indiafacts.co.in/mohan-bhagwat-right-india-hindu-nation/#.VFO03jSUfv4
 2. http://www.onislam.net/english/ask-about-islam/society-and-family/interfaith-issues/166094-are-muslims-from-hindu-origin.html
 3. http://lostislamichistory.com/how-islam-spread-in-india/}
 4. Ferishtah,Tarikh-i-Ferishtah, Persian text, Nawal Kishore Press, Lucknow 1865, Vol.1, p.16.
 5. Stanley Lane-Poole, Medieval India under Muhammadan Rule (London, 1926), p.1.
 6. Chachnama, trs. in H.M. Elliot and J. Dowson,History of India as told by its own Historians, 8 Vols., London, 1867-77, (here after as E and D), Vol. I, p. 207.
 7. Al Biladuri,Futuh-ul-Buldan, trs. E and D, I, p.120.
 8. Ibid., pp.122-24.
 9. Chachnama, op. cit., pp. 163-64. Also pp. 205-07, 208.
 10. Biladuri, pp.124-25. Also cf. Chachnama, pp.207-208. Also Cambridge history of India(hereafter C.H.I.) ed. Wolseley Haig, Vol. III, p.3.
 11. Dension Ross, Islam, p.18.
 12. Biladuri, pp.115-16. Also p.415.
 13. Tara Chand, Influence of Islam on Indian Culture (Allahabad, 1946), pp.31-33.
 14. Ibn Hauqal, Ashkalal-ul-Bilad, trs. in E and D, I, p.34. Also p.457. See also Istakhri Kitab-ul-Aqalim, E and D, I, p.27.
 15. Ibn Hauqal, p.38.
 16. Muhammad Ufi, Jami-ul-Hikayat, E and D, II, pp.163-64. Also S. C. Misra, Muslim Communities in Gujarat (Bombay,1964), p.5.
 17. Tara Chand, op. cit., p.33. Also Aziz Ahmad,Studies in Islamic Culture in the Indian Environment (Oxford, 1964), p. 77.
 18. Tara Chand, Ibid., p.34.
 19. Sulaiman Saudagar, Hindi trs. of his Narrative by Mahesh Prasad, (Kashi, Sam. 1978, C.E. 1921), p.84
 20. Few sentences are taken as it is from the book “Indian Muslims; who are they” which can be read in voice of dharma web portal.

Falling short of Expectations -Vishwas K

Pick all the adjectives from your vocabulary basket and accolade the little master, I have little doubt that basket would finally be empty but you would still want to heap the praise. But one verb that will so easily supersede all those adjectives in making the man what he is, is ‘hunger’.  If his longevity in the game that he loved so much was not sufficient to prove that hunger was what that drove him all these years, reading his autobiography ‘Playing It My Way’ will surely do. When you finish reading the book if you believe there was or is another man who is or was hungrier than Sachin to play the game, then we may well have to rethink of the meaning of the word. Such was his appetite. The book doesn’t reveal but emphasizes it. Apart from this, what more does the book offer? Disappointingly, not much.
Cricket being a game of such high technicality and precision, who better than Sachin, who has mastered it, to speak of. But you can handpick the pages where he has dealt with it. The way he picked Muruli’s doosra, the way he countered Pedro Collins, the way he studied Dion Nash makes for a wonderful reading. But it ends there. There is no mention of his encounters with a McGrath or an Akram or a Donald or a Chaminda Vass which we fans would have loved reading.
It seems that Sachin and Boria have tried to put too many things in too little space and in the process have made it less enjoyable. There are so many things in the book of which you are already aware of.  There is no need to mention the dates of the matches being played and runs he scored in every innings but we would have loved to read how he managed to score them more and more.
His journey to international cricket has been portrayed rather seamless. It may well have been but to read of how he scored his 1st Ranji ton or a 1st Irani trophy century, would have been great. To read how it all started from scratch would have been very exciting. No doubt his childhood was short but it was the childhood of India’s greatest ever. Some of his great centuries in the very beginning of his career at Old Trafford or at Perth have been dealt with very less words. His memory might have been our enemy though.

Sachin is very candid of what transpired at Multan when Dravid declared, leaving him stranded at 194. He not only questions Dravid’s declaration but also gives his frank perception of what had happened at Sydney when Dravid was nearing his century.  He also doesn’t mince words in describing Greg Chappel’s stint and Ian Chappel’s observations. But we would have loved the same candidness in case of match fixing and spot fixing debacles or in case of the decline of his friend Kambli. Though he speaks about the zonal selection system he could well have taken a stand in that regard to help Indian cricket in future. But his silence speaks the loudest and Sachin is clearly not keen on giving raise to any speculations. He may well be true but to think Sachin only knew so less would be naive.

India couldn’t have wished for so many great players coming together to form such a solid team with the likes of Sachin, Dravid, Laxman, Saurav, Kumble, Sehwag, Zaheer, Bhajji peaking  at the same time . But there is very less mention of these players throughout the book to our liking. Sachin/Saurav have scored highest runs opening the innings, Sachin/Dravid have put on some record partnerships together. But these partnerships are discussed very little. There is very less words in the book which describes how he saw the game from a non strikers end or from slips or from mid off, how he saw a Dravid or a Sehwag or a Lara or a Ponting bat. Sehwag was the lone batsman having fun at Lanka while others were struggling for runs against Mendis; Dravid was the only positive in the disastrous tour of England where India surrendered its No 1 position. But the book doesn’t mention any of these monumental innings. We all would have loved to read how he saw a Kumble or a Srinath bowl from mid off. Wouldn’t we?

Sachin makes us go through the countless injuries he has undergone in the length career. After being introduced to all the difficulties he went through each and every time, our heart does come out for the little man who has made the nation proud. Winning a match for India, how big it meant for him can be clearly seen from the way he describes the quarterfinal contest against Pakistan at Centurion. With the kind of injuries he had to overcome, the book explains the life of a sportsman but does little to explain the life of a batsman.  You find very few pages in the book which explains the struggle of Sachin as batsman apart from his struggles in the last one year or so. Along with the injuries, Sachin went through a rough patch in home series against Pakistan and England in 2004/05. India was bamboozled by Mendis in Lanka in 2008. But there is no mention of these series. We would have loved to read how he coped with his dip in form in the middle, in between those 22 yards. Once again the book disappoints in that regard.

Throughout the book Sachin has done his best to not keep the glass half empty which otherwise we would have filled the other half with our perceptions.  Boria’s language throughout the book is very much devoid of literary beauty making the book less delicious. Though the book falls much below of our expectations, I would like to end this piece with one of the most beautiful lines told by Sachin.

“Cricket is best played when your mind is at the opposite end and problems occur when your mind is stuck at your end”. Only wish the book had more such lines.

Interstellar v/s Vedas – Shankar Prasad

Although there were many flaws in the movie Interstellar noted by a NASA scientist himself here (http://qr.ae/mWJSp ) we can acknowledge the fact that the movie had a great concept and the direction was extraordinary. As a normal viewer when I left the theatre after watching this movie I was also confused and had a lot of questions in my mind and once I reached home I started searching for reviews on different website. But none of them were satisfactory for my questions.

I have this habit of reading my guru’s biography daily. He once told that only true belief on the guru can connect with his disciple. In the movie the daughter had the belief that his dad will come back for sure and that belief connected them. No one would have understood those signals if it was not for his daughter.

In the vedas it is written that,

सहस्रशीर्षा पुरुषः सहस्राक्षः सहस्रपात् ।
स भूमिं विश्वतो वृत्वात्यतिष्ठद्दशाङुलम् ॥

The Purusha (The Universal Being) has Thousand Heads, Thousand Eyes and Thousand Feet (Thousand signifies innumerable which points to the omnipresence of the Universal Being).

In the movie the hero goes inside a black hole and gets trapped in a 5 dimension world. We are bounded by this 3 dimension world. When someone says that the guy has got wisdom (mukti), he has entered the dimensionless or infinite dimensioned world. And the only thing that connects us (disciples) and them is true love or the belief that we put in them.

पुरुष एवेदं सर्वं यद्भूतं यच्च भव्यम् ।
उतामृतत्वस्येशानो यदन्नेनातिरोहति ॥

The Purusha is indeed all of this (Creation) in essence. That which existed in the Past, and that which will exist in the Future.

Nolan takes his hero into a 5 dimension world but our forefathers new about getting into infinite dimension or dimensionless world, where we are not limited by the three dimensions we see or the fourth dimension which is time. Shankaracharya said “Aham bramhasmi”. He saw himself in a dimension less world and he was everywhere. He was in the past, present and future. That world was not bounded by time or anything. Einstein in his book “Theory of relativity” said everything in this world is relative except the light. Proof for that is that light has same speed anywhere in the universe.

For a guy standing on a planet which is 500 light years away, Einstein has not been born in this world.

If we see a star in the sky, we are seeing the state of the star which was some million years back. What we are seeing is just false. What we are seeing is what our sensory organs say and what the mind interprets it.

Vedas had everything explained in it. How did they know that there will be 4 yugas and each yuga lasts these many years and whatever they had explained to happen in each yuga has happened. Simple example is that the usage of the word “Bhugola” suggests that millions of years before, they knew that earth is round in shape. How did they know about this fact sitting inside their houses…? They saw themselves in a dimensionless world explaining them about this fact. “They were their own gods”.

The hero of the movie assists his daughter about what is going to happen since he had experienced it by himself. He dint believe in himself, so when he saw a book fall down from the shelf, he ignored it. But his daughter had that belief and she interpreted it. Whatever happens around us in the nature is a sign that we are telling ourselves about what is going to happen. We just ignore it.

We have read that the people of vedic times used to observe nature and write the Vedas.

In my conclusion, we wrote the vedas, actually I can say I was part of that. At some point of time  we attained the power to go dimensionless and we assisted the people of that old time to write the vedas since we had seen what has happened after that. That is why it is written in the vedas that these four yugas is a cycle. We are our own gods, we just ignore that. We should believe in that guru who assists us in knowing/experiencing this fact.

India, as it is – D. H. Pavankumar

On August 15th 1947, Jawaharlal Nehru gave a historic speech famously called Tryst with destiny. The euphoria of Independence had blind folded people in foreseeing the catastrophic failure of Indian visions and dreams. Yes. I am certain in saying, there was an another face to this epic day. If  patriotism , leadership was at cost in electing Prime minister of Republic of India, it should had been Sardar Vallabhai patel who should have delivered the first speech of Independent India.  Internal politics and a mere favouritism became the criteria and India paid its cost. If Sardar would have been our 1st Pm, things would have been different. The blind love of Nehru towards Marxism and communist ideologies resulted in devastation. The loss of Askin chin also failed to open Nehru’s eyes.

The birthday of Mahatma Gandhi has shadowed the birthday of another great leader of India, Lal Bahadur Shastry. Kamaraj was instrumental in making Shastry as PM. His dedication and sincerity in politics is a role model to every politician. Indian farmers were inspired when they heard of PM doing agricultural work. He had also boosted the morality of Jawans. The mysterious death of Lal Bahudur  on jan 11th 1966, the day after signing the Tashkent agreement was a great loss to the nation. The untimely death of Shastry created a vacuum in congress. The internal politics and favouritism once again played its card in making Indira to be the PM instead of Morarji Desai.

“Many that live deserves death. And some that die deserve life.”

These two dates of India history has created a legacy which prevails even today. The footprints of legacy can be felt through Kashmir issues, COK, bofors, emergency. Even today ‘what if ‘ question has haunts historians. What if Sardar was our 1st PM? What if Shastry has not died on Jan 11th 1966? What if Morarji was the successor of Shastry? If Morarji, Sardar was our PM and Shastry lived a bit longer, there would have been no question of Nehru and his legacy.

In the light of these two dates, lets understand the importance of May 26th, 2014. The legacy had made India, a desolation of  hope. The scams, corruption had shaken our faith in government. We were desperate to have a leader who was trust worthy and can fill the vacuum of leadership.  We needed a leader and we got Narendra Damodardas Modi.
I strongly opine Bjp – Modi = Congress 2.0.

It has been 6 months after Modi has become PM. The positive wave of change can be felt in his leadership. He has given a new dimension to Indian politics. His swearing in ceremony had witnessed the presence of SAARC members. Till date he has made nine foreign tours.  The positive vibe of Madison square and Australia visit has deepened the bonding of NRIs and India.

Though Modi has become softer towards Congress, Congress has tightened its fist in giving counter attack in every sphere of governance. The popularity of Modi among Indian diaspora has irked Congress to the extent that Spokes person of Congress, Ajay kumar said “the government is gaining popularity because of ‘good event management’ not ‘good governance’. Modi is gaining popularity in the country and abroad because of good event management.  In reality, no development work is visible yet.” On Nov 16th , Salman khurshid questioned the gathering of Indian diaspora. He stated” have been to Naypyidaw(Myanmar), streets are empty there, he must have taken among them”

To list the few good works of Modi till today, scrapping of planning commission, Jan Dhan Yojana, Make in India, Swatchh bharath, Shrameva jayate, Run for Unity, Defence decisions. These stands  tall among the various programmes. The inclusion of Manohar Parrikar and Suresh Prabhu is great news. Smriti Irani for HRD, inclusion of Giriraj is another face of Modi’s cabinet. A lot has to be done in HRD ministry, Smriti Irani is a wrong choice for it.  Supreme court has condemned governments status on clean Ganga.

The increasing popularity of Modi in world media irks congress at the same time attracted CEOs of different companies. Recently, Mckinsey, CEO Dominic Barton has said “Modi has turned India into a magnet”.

Finally, the governance of Modi reminds me the dialogue of Gandalf in Lord of the rings, “Some believe it is only great power that can hold evil in check. But that is not what I have found. I have found that it is small day deeds of ordinary folk that keep the darkness at bay. Small acts of kindness and love”.

The road has been laid and destination has been fixed. There will be deviations ( u turns of declassifying netaji files and so on ) in governance, with the knowledge of Modi’s past, Lets hope, he wont fail people’s aspirations. Best is the good word, I hope we should live to see it.

ಜೊತೆ ಜೊತೆಯಲಿ Vindu G Krishna

ಪಕ್ಕದ ಮನೆಯ ರವಿಗೆ ಅವಳಿಗಳು ಜನಿಸಿರುವುದು ಶಾರದಮ್ಮನಿಗೂ ತಿಳಿದಿತ್ತು. ಕೆಲಸದ ನಡುವೆ ಬಾಣಂತಿ ಮತ್ತು ಮಕ್ಕಳನ್ನು ನೋಡಿಕೊಂಡು ಬರಲು ಬಿಡುವಾಗಿರಲಿಲಲ್ಲ. ಅವರು ಆಸ್ಪತ್ರೆಯಿಂದ ಮನೆಗೆ ಬಂದು ಸ್ವಲ್ಪವೇ ಹೊತ್ತಾಗಿತ್ತು. ನೋಡಿಕೊಂಡು ಬರಲು ಹೋದ ಶಾರದಮ್ಮನಿಗೆ ತೊಟ್ಟಿಲು ಸಮೀಪಿಸುತ್ತಿದ್ದಂತೆ ಮೂರ್ಛೆ ಬೀಳುವಂತಾಗಿತ್ತು. ಎರಡು ಮುದ್ದಾದ ಗಂಡು ಮಕ್ಕಳು ಶಾಂತವಾಗಿ ನಿದ್ರಿಸುತ್ತಿದ್ದವು. ಆದರೆ ಎರಡೂ ಮಕ್ಕಳು ಹೊಟ್ಟೆಯ ಬಳಿ ಅಂಟುಕೊಂಡಿದ್ದವು. ವೈದ್ಯ ಭಾಷೆಯಲ್ಲಿ ಅಂತಹ ಮಕ್ಕಳನ್ನು “ಸಯಾಮಿ ಅವಳಿಗಳು” ಎನ್ನುತ್ತಾರೆ. ಭ್ರೂಣಾವಸ್ಥೆಯಲ್ಲಿಯೇ ಅವಳಿಗಳು ಒಂದು ಭಾಗದಲ್ಲಿ ಅಂಟಿಕೊಂಡಿರುತ್ತವೆ.

ಇದು ತುಂಬಾ ಅಪರೂಪದ ನ್ಯೂನತೆ. 49000-89000 ಹುಟ್ಟುವ ಮಕ್ಕಳಿಗೆ ಒಂದು ಮಗು ಹೀಗೆ ಹುಟ್ಟುವ ಸಾಧ್ಯ ತೆಯಿದೆ. 19 ನೇ ಶತಮಾನದಲ್ಲಿ ತಾಯ್ಲೆಂಡಿನ ಸಯಾಮ್ ಎಂಬ ಹಳ್ಳಿಯಲ್ಲಿ ಚಾಂಗ್ ಮತ್ತು ಎಂಗ್ ಬುರ್ಕರ್ ಎಂಬ ಅವಳಿಗಳು ತುಂಬ ಜನಪ್ರಿಯವಾದರು. ಅಂದಿನಿಂದ “ಸಯಾಮಿ ಅವಳಿಗಳು” ಎಂಬ ಹೆಸರು ಬಂತು.  ಅವಳಿಗಳು ಕೆಲವೊಮ್ಮೆ ಎದೆ, ಹೊಟ್ಟೆ, ತಲೆಯ ಹಿಂದಿನ ಭಾಗದಲ್ಲಿ ಅಂಟಿಕೊಂಡಿರುತ್ತವೆ. ಒಂದೇ ಜೀವಾಣುವಿನಿಂದಾದ ಅವಳಿಗಳು (monozygotic twins) ಒಂದೇ ಭ್ರೂಣದ ಹೊರಪೊರೆ(chorion), ಜರಾಯು(placenta), ಆಮ್ನಿಯೋಟಿಕ್ ಚೀಲ(amniotic sac) ಹಂಚಿಕೊಂಡಿರುತ್ತಾರೆ. ಫಲೀಕರಣವಾದ ಅಂಡಾಣು ವಿಭಜನೆಯಾಗಿ ಭ್ರೂಣವಾಗಿ ಬೆಳೆಯುತ್ತದೆ. ಆ ಸಮಯದಲ್ಲಿ ಕೋಟ್ಯಾಂತರ ಮೂಲಕೋಶಗಳು(stem cells) ಜೀವ ತಾಳುತ್ತವೆ. ತಮ್ಮದೇ ಕೆಲಸವನ್ನು ಮಾಡಲು ಹೊರಟಿರುವ ಮೂಲಕೋಶಗಳನ್ನು ಹುಡುಕುತ್ತವೆ. ಹೀಗೆ ಮತ್ತೊಂದು ಅವಳಿಯಲ್ಲಿರುವ ಕೋಶಗಳನ್ನು ಹುಡುಕಿ, ವಿಭಜನೆಗೊಂಡು, ಅಂಗಾಂಗಗಳು ಬೆಳೆದು ದೇಹಗಳು ಅಂಟಿಕೊಳ್ಳುವಂತೆ ಮಾಡುತ್ತವೆ.

ಶಸ್ತ್ರಚಿಕಿತ್ಸೆಯಿಂದ ಅವಳಿಗಳನ್ನು ಬೇರ್ಪಡಿಸಬಹುದು. ಆದರೆ ಬಹಳ ಕ್ಲಿಷ್ಟ ಕರವಾದ ವಿಧಾನ. ಕನಿಷ್ಠ ಒಂದು ಅಥವಾ ಇಬ್ಬರೂ ಸಾಯುವ ಸಾಧ್ಯತೆಗಳಿರುತ್ತದೆ . ಮೆದುಳು ಒಳಗೊಂಡಿರುವುದರಿಂದ ತಲೆಯ ಹಿಂದೆ ಅಂಟಿಕೊಂಡಿರುವ ಅವಳಿಗಳನ್ನು  ಪ್ರತ್ಯೇಕಿಸುವುದು ಅತ್ಯಂತ ಸವಾಲಿನ ಕೆಲಸ. 1986ರಲ್ಲಿ ಇಂತಹ ಅವಳಿಗಳನ್ನು ಐವತ್ತು ವೈದ್ಯರ ತಂಡದೊಂದಿಗೆ 22 ತಾಸು ಸತತವಾಗಿ ಶಸ್ತ್ರಚಿಕಿತ್ಸೆ  ನಡೆಸಿ ಅವಳಿಗಳನ್ನು ಬೇರ್ಪಡಿಸಿದ ಕಿರುತಿ ಅಮೆರಿಕದ ಬೆನ್ ಕಾರ್ಸನ್ ರವರಿಗೆ ಸಲ್ಲುತ್ತದೆ.

ಇತಿಹಾಸದಲ್ಲಿ ಸಯಾಮಿ ಅವಳಿಗಳನ್ನು ಪ್ರತ್ಯೇಕಿಸುವ ಪ್ರಯತ್ನಗಳು ಯಥೇಚ್ಛವಾಗಿ ನಡೆಯುತ್ತಾ ಬಂದಿದೆ. ಈ ಕ್ಷೇತ್ರದಲ್ಲಿ ಭಾರತವೇನೂ ಹಿಂದೆ ಬಿದ್ದಿಲ್ಲ. ಎರಡು-ಮೂರು ವರ್ಷಗಳ ಹಿಂದ ನೈಜಿರಿಯಾದ ದಂಪತಿ  ಒಂಬತ್ತು ತಿಂಗಳ ಸಯಾಮಿ ಅವಳಿಗಳನ್ನು ಹೊತ್ತುಕೊಂಡು ಬೆಂಗಳೂರಿಗೆ ಬಂದಿಳಿದರು. ಅವು ಹೊಟ್ಟೆ ಭಾಗದಲ್ಲಿ ಅಂಟಿಕೊಂಡಿದ್ದವು ಹಾಗೂ ಒಂದೇ ಪಿತ್ತಜನಕಾಂಗ(liver), ಸಣ್ಣ ಕರುಳು, ಪಿತ್ತಕೋಶ,(gall bladder)ಗಳನ್ನು  ಹಂಚಿಕೊಂಡ್ಡಿದ್ದವು. ನಾರಾಯಣ ಹೃದಯಾಲಯದಲ್ಲಿ ಯಶಸ್ವಿಯಾಗಿ ಬೇರ್ಪಡಿಸಿದರು. ನಂತರ ಅನೇಕ ಶಸ್ತ್ರಚಿಕಿತ್ಸೆಗಳು ನಡೆದಿವೆ.

ಹಾಗಂತ ಇವರು ಅಂಗವಿಕಲರಂತೆ ಸುಮ್ಮನೆ ಕುಳಿತಿಲ್ಲ. ಜೀವನ ಚೈತನ್ಯ ವೆಂಬುದು ಇವರನ್ನು ಚುರುಕಾಗಿಸಿದೆ.

ಮಿಲಿ ಮತ್ತು ಕ್ರಿಸ್ಟಿನ್ ಮ್ಯಾಕೋಯ್(1851-1912) “ಎರಡು ತಲೆಯ ಕೋಗಿಲೆ ” ಹಾಗೂ “ಪ್ರಪಂಚದ ಎಂಟನೇ ಅದ್ಭುತ” ಎಂಬ ಹೆಸರಿನಡಿ ಅನೇಕ   ಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಡೈಸಿ ಮತ್ತು ವಾಯ್ಲೆಟ್ ಹಿಲ್ಟನ್ (1908-1969) “freaks” ಮತ್ತು  “chained for life ” ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ.

ಲೋರಿ ಮತ್ತು ಜಾರ್ಜ್ ಶಾಪೆಲ್(1961) ಕೂಡ ಮನರಂಜನೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಅಬಿಗೆಯ್ಲ್  ಮತ್ತು ಬ್ರಿಟ್ಟಾನಿ ಹೆನ್ಸೆಲ್(1990)  ರವರು ಬೆಥೆಲ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಹಾತ್ಮ ಗಾಂಧೀಜಿಯವರು ಹೇಳವಂತೆ “strength doesnot come from physical capacity, it comes from an indomitable will” ಎಂಬಂತೆ ಹುಟ್ಟಿನಿಂದಲೇ ದೈಹಿಕ ಅಸಹಾಯಕತೆಯನ್ನು  ಪಡೆದುಕೊಂಡು ಬಂದವರೇ ಅಸಾಧ್ಯವಾದುದನ್ನು ಸಾಧಿಸಿ ತೋರಿಸುವಾಗ, ಹೇಳಿದ ಕೆಲಸ ಮಾಡಲು ನೂರಾರು ನೆಪ ಹುಡುಕುವ ನಮ್ಮಂತಹವರು ಚೂರು ಮನಸ್ಸು  ಮಾಡಿದರೆ ನಡೆಯಬಹುದಾದ ಪವಾಡಗಳನ್ನು ಲೆಕ್ಕವಿಡಲಾದಿತೇ?

ಹವ್ಯಾಸ ಮತ್ತು ವ್ಯಕ್ತಿತ್ವ – ಸುನೀಲ್ ಕುಮಾರ್

ಮನಸ್ಸಿನ ಆಳದಲ್ಲಿ ನೆಲೆಯೂರಿ ನಿಲ್ಲುವ ಹಲವಾರು ಸಂಗತಿಗಳು ಮನಸ್ಸಿನ ತುಳಿತ,ದುಃಖ,ತೊಳಲಾಟ,ಅಸಮಧಾನ ,ಅನುಮಾನ ಮೊದಲಾದವುಗಳು ಮನಸ್ಸಿನ ಆಳದಲ್ಲಿ ಸ್ಥಾನ ಪಡೆದುಕೊಳ್ಳುತ್ತವೆ. ಇವೆಲ್ಲವುಗಳನ್ನು ಮೀರಿ ನಿಲ್ಲುವ ಶಕ್ತಿ ವ್ಯಕ್ತಿಯ ಹವ್ಯಾಸಕ್ಕೆ,ವ್ಯಕ್ತಿತ್ವಕ್ಕೆ, ಮಾನವನ ಸಾಮಾಜಿಕ ಜೀವನಕ್ಕಿದೆ.
ಸಾಮಾಜಿಕ ಜೀವನ ಎಷ್ಟರ ಮಟ್ಟಿಗೆ ಮಾನವನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಊಹಿಸಲು ಸಾದ್ಯವಾಗುವುದಿಲ್ಲ. ಇದು ಮನುಜನಿಗೆ ತಿಳಿಯದೆ ಎಷ್ಟೋ ಬದಲಾವಣೆಗಳಿಗೆ ಎಡೆಮಾಡಿಕೊಳ್ಳುತ್ತದೆ. ನಾವು ಸಂಧಿಸುವ ಎಷ್ಟೋ ವ್ಯಕ್ತಿಗಳು, ಸಂದರ್ಭಗಳು, ಸಾಕಷ್ಟು ಅನುಭವಗಳಿಗೆ ಸಾಕ್ಷಿಯಾಗುತ್ತದೆ.
ಯಾರದೋ ಜೀವನದಲ್ಲಿ ನಡೆದ ಕಷ್ಟದ/ಸುಖದ ಅನುಭವಗಳು ನಮ್ಮ ಜೀವನದಲ್ಲಿ ನಡೆಯದಿದ್ದರೂ ನಮ್ಮದೇ ಅನುಭವಗಳಾಗಿ ಮುಂದಿನ ನಡೆಗೆ ದಾರಿದೀಪಗಳಾಗುತ್ತವೆ.
ಹಲವರ ಆಕರ್ಷಕ ವ್ಯಕ್ತಿತ್ವ, ಮ್ರದುಸ್ವಭಾವ, ಇನ್ನೊಬ್ಬರ ಮೇಲೆ ತೋರುವ, ಬೇರೆಯವರ ಮೇಲೆ ಪ್ರಭಾವ ಬೀರುತ್ತದೆ.
ಸಾಮಾಜಿಕ ಜೀವನ ಓದದೇ ಇರುವ ಎಷ್ಟೋ ಪಾಠಗಳನ್ನು ಪ್ರಯೋಗಗಳ ಮೂಲಕ ಕಲಿಸುತ್ತದೆ. ನಾವು ಸಂಧಿಸುವ ಎಷ್ಟೋ ಜನರು, ಪ್ರದೇಶಗಳು, ಮನಸ್ಸಿನ ಮೇಲೆ ಹಾಗೆ ಅಚ್ಚಾಗಿ ಬಿಡುತ್ತದೆ.
ಎಲ್ಲರಿಗೂ ಅವರವ ಜೀವನಕ್ಕೆ ಅವರೇ ನಾಯಕರು/ನಾಯಕಿಯರು. ಆದರೆ ನಿಜಾರ್ಥದಲ್ಲಿ ಅವರು ನಾಯಕ/ನಾಯಕಿಯರಾಗುವುದು ಅವರವರ ವ್ಯಕ್ತಿತ್ವ ಮತ್ತು ನಡವಳಿಕೆಗಳ ಮೇಲೆ ಅವಲಂಬಿತ.
ನಿಮ್ಮಲ್ಲಿರುವ ಆಕರ್ಷಣ ಗುಣ ನಿಮಗೆ ಗೊತ್ತಿಲ್ಲದೆ ಇತರರ ಅನುಭವಕ್ಕೆ ಬಂದಿರುತ್ತದೆ. ಕೆಲವು ಸಂದರ್ಭಗಳಲ್ಲಿ ಆ ಗುಣಗಳು ನಮಗೆ ಗೊತ್ತಾಗಿ ಆಶ್ಚರ್ಯಚಕಿತರನ್ನಾಗಿಸುವುದುಂಟು.
ಸ್ವಚ್ಚಂದ ಜೀವನಕ್ಕೆ ಹವ್ಯಾಸಗಳ ಕೊಡುಗೆ ಅಪಾರ. ಎಲ್ಲರಿಗೂ ಒಂದಾದರೂ ಹವ್ಯಸ ಅತ್ಯವಶ್ಯಕ. ಕವಿತೆ, ಓದು, ಪ್ರವಾಸ, ಯೋಗ,ಚಿತ್ರಕಲೆ, ನಟನೆ,ಪಕ್ಷಿವೀಕ್ಷಣೆ, ವಾಹನ ಸವಾರಿ ಹೀಗೆ ಯಾವುದಾದರೊಂದು ಹವ್ಯಾಸ ಮಾನಸಿಕ ರೋಗಗಳನ್ನು ಸ್ವಲ್ಪಮಟ್ಟಿಗಾದರೂ ಹೊಡೆದೋಡಿಸುತ್ತದೆ.
ಜೀವನದಲ್ಲಿ ಎದುರಾಗುವ ಎಲ್ಲ ಸುಖ,ದುಃಖ ಕಾಲ್ಪನಿಕ. ಅನುಭವಗಳಷ್ಟೆ ಎಲ್ಲವನ್ನು ಮೀರಿಸುವ, ಎದೆಗುಂದದೇ ಎಲ್ಲವನ್ನು ಎದುರಿಸಲು ಬೇಕಾಗುವ ಪರಿಕರಗಳು.

ನಮ್ಮ ಬೆಂಗಳೂರು –ಆರ್. ಕೆ

ನಮ್ಮ ಬೆಂಗಳೂರು. ಪ್ರಚಲಿತ ವಿದ್ಯಮಾನಗಳ ಪ್ರಕಾರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೂ ಕೂಡ ಒಂದು ಸ್ಥಾನ ಉಂಟು. ಇಂಥ ನಮ್ಮ ಹೆಮ್ಮೆಯ ಬೆಂಗಳೂರಿನ ಬಗ್ಗೆ ಎಷ್ಟೇ ಬಡಾಯಿ ಕೊಚ್ಚಿಕೊಂಡರೂ ಕಡಿಮೆ0iÉುೀ. ಕಳೆದ ಸಂಚಿಕೆಯಲ್ಲಿ ದಶಕಗಳ ಹಿಂದಿನ ಬೆಂಗಳೂರಿನ ಚಿತ್ರಣವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ಅದನ್ನು ಮುಂದುವರಿಸುವ ಇಚ್ಛೆಯಿಂದಾಗಿ ಈ ಸಂಚಿಕೆಯಲ್ಲಿ ಬೆಂಗಳೂರಿನ ಕುರಿತಾದ ಮತ್ತಷ್ಟು ಕೆಲ ಪ್ರಾಚೀನ ಮಾಹಿತಿಗಳನ್ನು ಹುಡುಕಿ ತೆಗೆದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಬೆಂಗಳೂರು ಮೊದಲು ಬೆಂದಕಾಳೂರು ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು ಅನ್ನುವಂತಹ ವಿಷಯ ಎಲ್ಲರಿಗೂ ಗೊತ್ತಿರೋದೇ. ಇದಕ್ಕೆ ಒಂದು ಕಥೆಯ ಹಿನ್ನೆಲೆಯೂ ಉಂಟು. 12ನೇ ಶತಮಾನದಲ್ಲಿ ಹೊಯ್ಸಳ ಸಾಮ್ರಾಜ್ಯದ ವೀರ ಬಲ್ಲಾಳ-II ಎಂಬ ರಾಜನು ಒಂದು ದಿನ ಪ್ರಜೆಗಳ ಯೋಗಕ್ಷೇಮ ವಿಚಾರಿಸಲೆಂದು ರಾಜ್ಯದ ಸುತ್ತು ಹೊರಟಿದ್ದಾಗ, ಮಾರ್ಗ ಮಧ್ಯೆ ಭೇಟಿಯಾದ ಹಿರಿಯ ವಯಸ್ಸಿನ ಮುದುಕಿಯೊಬ್ಬಳು ಬೇಯಿಸಿದ ಕಾಳುಗಳನ್ನು ಪ್ರೀತಿಯಿಂದ ನೀಡಲಾಗಿ, ಆ ಸ್ಥಳವನ್ನು ಬೆಂದಕಾಳೂರು ಎಂದು ಹೆಸರಿಸಲಾಯಿತು ಎಂಬುದು ಆ ಕಥೆಯ ಸಾರಾಂಶ. ಆದರೆ ಕೆಲವೊಂದು ಇತಿಹಾಸ ತಜ್ಞರು ಹೇಳುವಂತೆ 9ನೇ ಶತಮಾನದಲ್ಲಿ ಅಂದರೆ ವೀರ ಬಲ್ಲಾಳ ರಾಜನ ಆಳ್ವಿಕೆಯ ಮೊದಲೇ ಬೇಗೂರು ಎಂಬ ಸಣ್ಣ ಹತ್ತಿರ ಇದ್ದ ಒಂದು ದೇವಸ್ಥಾನದಲ್ಲಿ ಹಳೆಯ ಪಳೆಯುಳಿಕೆಗಳು ದೊರೆತಿದ್ದು, ಅದರಲ್ಲಿ ಬೆಂಗಳೂರು ಎಂದು ನಮೂದಿಸಲಾಗಿತ್ತು ಎಂದು ವಾದಿಸುತ್ತಾರೆ. ಈ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದ್ದು ಯಾವುದು ಸತ್ಯ ಎಂಬುದು ಸಂಶೋಧನೆಯ ನಂತರವಷ್ಟೇ ಗೊತ್ತಾಗುವಂಥದ್ದು. ನಂತರದ ದಿನಗಳಲ್ಲಿ ಬೆಂಗಳೂರಿಗೆ ಒಂದು ತೂಕ ತಂದುಕೊಟ್ಟಿದ್ದು ಮಾಗಡಿಯ ಹಿರಿಯ ಕೆಂಪೇಗೌಡರು. ಯಲಹಂಕದ ಭೂಪಾಲರೂ ಈ ಬೆಂಗಳೂರು ಕಟ್ಟುವ ಕೆಲಸದಲ್ಲಿ ಕೆಂಪೇಗೌಡರಿಗೆ ಸಹಾಯ ಹಸ್ತ ಚಾಚಿದ್ದನ್ನು ಮರೆಯುವಂತಿಲ್ಲ. ಕ್ರಿ.ಶ. 1537 ರಲ್ಲಿ ಕೆಂಪೇಗೌಡರು ಈಗಿನ ಕೃ.ರಾ.ಮಾರುಕಟ್ಟೆ ಮತ್ತು ಅವೆನ್ಯೂ ರಸ್ತೆ ಜಾಗದಲ್ಲಿ ಒಂದು ಮಣ್ಣಿನ ಕೋಟೆಯನ್ನು ಕಟ್ಟಿ ಅದಕ್ಕೆ 8 ಹೆಬ್ಬಾಗಿಲುಗಳನ್ನು ನಿರ್ಮಿಸುತ್ತಾರೆ . ಅವುಗಳೆಂದರೆ
1.ಯಲಹಂಕ ಗೇಟ್(ಈಗಿನ ಮೈಸೂರು ಬ್ಯಾಂಕ್ ಸರ್ಕಲ್ ಹತ್ತಿರ)
2. ಯಶವಂತಪುರ ಗೇಟ್(ಉಪ್ಪಾರಪೇಟೆ ಪೋಲಿಸ್ ಸ್ಟೇಷನ್ ಹತ್ತಿರ)
3. ಕೆಂಗೇರಿ ಗೇಟ್(ಪಶ್ಚಿಮದ ದಿಕ್ಕಿಗೆ)
4. ಹಲಸೂರು ಗೇಟ್(ಈ ಗೇಟ್ ನ ನೆನಪಿಗಾಗಿ ಪೋಲಿಸ್ ಸ್ಟೇಷನ್ ಒಂದನ್ನು ಹೆಸರಿಸಲಾಗಿದೆ).
5. ಕನಕನ ಹಳ್ಳಿ ಗೇಟ್(ವಕ್ಕಲಿಗರ ಸಂಘ ಬಿಲ್ಡಿಂಗ್ ಹತ್ತಿರ)
6. ಸಂಡೆಕೊಪ್ಪ ಗೇಟ್
7. ಆನೇಕಲ್ ಗೇಟ್
8. ಡೆಲ್ಲಿ ಗೇಟ್(ಕೃ.ರಾ.ಮಾರುಕಟ್ಟೆ ಒಳಗಡೆ).
ಮಣ್ಣಿನ ಕೋಟೆಯ ಒಳಗಡೆ ಬಳೇಪೇಟೆ, ಅರಳೇಪೇಟೆ, ಚಿಕ್ಕಪೇಟೆ, ದೊಡ್ಡಪೇಟೆ(ಅವೆನ್ಯೂ ರಸ್ತೆ), ಉಪ್ಪಾರಪೇಟೆ ಎಂಬ ಹೆಸರಿನಲ್ಲಿ ಮಾರುಕಟ್ಟೆ ಉದ್ದೇಶಿತ ಪೇಟೆಗಳನ್ನು ನಿರ್ಮಿಸಿದರು. ಈಗಲೂ ಈ ಸ್ಥಳಗಳು ಅದೇ ಹಳೆಯ ಹೆಸರುಗಳಿಂದ ಕರೆಯಲ್ಪಡುತ್ತಿರುವುದು ಆಶ್ಚರ್ಯಕರವಾದರೂ, ಗಮನಾರ್ಹ ಸಂಗತಿ.

ಹಿರಿಯ ಕೆಂಪೇಗೌಡರ ಕಾಲಾನಂತರ ಬಂದ ಕಿರಿಯ ಕೆಂಪೇಗೌಡರು ನಂತರದ ಬೆಂಗಳೂರಿನ ಬೆಳವಣಿಗೆಗಳಿಗೆ ಕಾರಣೀಭೂತರಾದವರು. ಕ್ರಿ.ಶ.1638 ರಲ್ಲಿ ರಣದುಲ್ಲಾಹ್ ಖಾನ್ ಮತ್ತು ಶಹಾಜಿ ಭೋಂಸ್ಲೆಯವರ(ಛತ್ರಪತಿ ಶಿವಾಜಿಯವರ ತಂದೆ) ಮುಖ್ಯಸ್ಥಿಕೆಯಲ್ಲಿ ಬಿಜಾಪುರದ ಸುಲ್ತಾನನಾಗಿದ್ದ ಆದಿಲ್ ಶಾಹ್ ನ ಸೈನ್ಯವು ಬೆಂಗಳೂರು ಕೋಟೆಯನ್ನು ಮುತ್ತಿಗೆ ಹಾಕಿತು. ಆ ಸಂದರ್ಭದಲ್ಲಿ ಕಿರಿಯ ಕೆಂಪೇಗೌಡರು ಬಲವಂತದಿಂದ ಮಾಗಡಿಗೆ ದೂಡಲ್ಪಟ್ಟರು. ಅವರು ಮಾಗಡಿಯಲ್ಲಿಯೇ ಚಿಕ್ಕದೊಂದು ಸಾಮ್ರಾಜ್ಯ ನಿರ್ಮಿಸಿಕೊಂಡು ಆಳ್ವಿಕೆ ಮಾಡಲು ಪ್ರಾರಂಭಿಸಿದ್ದರಿಂದ ಮಾಗಡಿ ಕೆಂಪೇಗೌಡರು ಎಂಬ ಹೆಸರು ಬಂತು. ತದನಂತರ 1728ರಲ್ಲಿ ಮಾಗಡಿಯನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಲಾಯಿತು. ಇತಿಹಾಸದಲ್ಲಿ ದಾಖಲಾಗಿರುವ ಪ್ರಕಾರ ಬೆಂಗಳೂರು ನಗರವು ಎರಡು ಸಲ ಉಡುಗೊರೆಯ ರೂಪದಲ್ಲಿ ನೀಡಲ್ಪಟ್ಟಿದೆ, ಹಾಗೆ ಮತ್ತೊಂದು ಸಾರಿ ಭಾರೀ ಬೆಲೆಗೆ ಮಾರಲ್ಪಟ್ಟಿದೆ. 1638ರಲ್ಲಿ ಆದಿಲ್ ಶಾಹ್ ನು ಶಹಾಜಿ ಭೋಂಸ್ಲೆಯವರಿಗೆ ಮೊದಲ ಬಾರಿಗೆ ಬೆಂಗಳೂರನ್ನು ಉಡುಗೊರೆಯ ರೂಪದಲ್ಲಿ ನೀಡಿದರು. ಅಲ್ಲಿಂದ ಮರಾಠಿಗರ ಕುರುಹು ಬೆಂಗಳೂರಿನಲ್ಲಿ ಕಾಣಲಾರಂಭಿಸಿತು. ನಂತರ 1689ರಲ್ಲಿ ಮೊಘಲರು ಬೆಂಗಳೂರನ್ನು ಮರಾಠ ರಾಜನಿಂದ ಕಸಿದು ಸುಮಾರು 3 ಲಕ್ಷ ಪಗಡೆಗಳಷ್ಟು(ಬಂಗಾರದ ನಾಣ್ಯಗಳು) ಭಾರೀ ಬೆಲೆಗೆ ಮೈಸೂರು ಸಂಸ್ಥಾನದ ಚಿಕ್ಕ ದೇವರಾಜ ಒಡೆಯರ್ ಅವರಿಗೆ ಮಾರಿದರು. ತದನಂತರ 1759ರಲ್ಲಿ ಎರಡನೇ ಕೃಷ್ಣರಾಜ ಒಡೆಯರು ಆಗಿನ ಮೈಸೂರು ಸಾಮ್ರಾಜ್ಯದ ಸೈನ್ಯದ ಕಮ್ಯಾಂಡರ್ ಆಗಿದ್ದ ಹೈದರ್ ಅಲಿಗೆ ಬೆಂಗಳೂರು ಉಡುಗೊರೆಯ ರೂಪದಲ್ಲಿ ಎರಡನೇ ಬಾರಿಗೆ ನೀಡಲ್ಪಟ್ಟಿತು. ಕೃಷ್ಣರಾಜ ಒಡೆಯರ ಕಾಲಾನಂತರ ಹೈದರಾಲಿಯು ಮೈಸೂರು ಸಂಸ್ಥಾನದ ಸ್ವಯಂ ಘೋಷಿತ ಸರ್ವಾಧಿಕಾರಿಯಾಗಿ ಆಡಳಿತದ ಚುಕ್ಕಾಣಿ ಹಿಡಿದನು. ನಂತರ ಅಂದರೆ 1799ರಲ್ಲಿ ಹೈದರಾಲಿಯ ಮಗ ಟಿಪ್ಪು ಸುಲ್ತಾನನ ಮರಣಾನಂತರ ಮೈಸೂರು ಸಾಮ್ರಾಜ್ಯ ಬ್ರಿಟಿಷರಿಂದ ಮರಳಿ ಒಡೆಯರ್ ಮನೆತನಕ್ಕೆ ಹಸ್ತಾಂತರಿಸಲಾಯಿತು. ನಂತರದ ದಿನಗಳಲ್ಲಿ ಬೆಂಗಳೂರು ನಗರವು ಒಡೆಯರ ಸ್ವಸ್ಥಳವಾದ ಮೈಸೂರಿಗಿಂತ ದುಪ್ಪಟ್ಟು ಗಾತ್ರದಷ್ಟು ಬೆಳೆಯಲು ಪ್ರಾರಂಭಿಸಿತು. ನಗರದ ಬೆಳವಣಿಗೆಯ ಶ್ರೇಯಸ್ಸು ಅರಸರಿಗಿಂತ ಜಾಸ್ತಿ ಸಲ್ಲಬೇಕಾದದ್ದು ಬ್ರಿಟಿಷರಿಗೆ ಅಂತ ಹೇಳಿದರೆ ಅತಿಶಯೋಕ್ತಿಯಾಗಲಾರದು. ಇದರ ಕುರಿತಾದ ಕೆಲವು ವಿಚಾರಗಳನ್ನು ಸಾಧ್ಯವಾದರೆ ಮುಂದಿನ ಸಂಚಿಕೆಯಲ್ಲಿ ಹಂಚಿಕೊಳ್ಳಲಿಚ್ಚಿಸುತ್ತೇನೆ.
ಸರ್ವರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತಾ ಇಲ್ಲಿಗೇ ಮುಗಿಸುತ್ತಿದ್ದೇನೆ.